ಸಮಾಜದ ಪ್ರತಿ ಕ್ಷೇತ್ರದಲ್ಲೂ ಯುವಪೀಳಿಗೆಯ ಪಾತ್ರ ತುಂಬಾ ಮಹತ್ವದ್ದಾಗಿರುತ್ತದೆ ಏಕೆಂದರೆ ಸಮಾಜವನ್ನು ಪ್ರಗತಿಯಪಥದತ್ತ ಮುನ್ನಡೆಸುವ ಸಾಮರ್ಥ್ಯ ಯುವಶಕ್ತಿಗೆ ಇದೆ. ಪ್ರತಿ ಸಮಾಜದ ಯುವಜನ ಆ ಸಮಾಜದ ಶಕ್ತಿಯಾಗಬೇಕಾಗಿದೆ. ಸಮಾಜದ ಹಿತಾಶಕ್ತಿಯಲ್ಲಿ ಪಾಲ್ಗೊಳ್ಳುವುದನ್ನು ಖಚಿತ ಪಡಿಸಿಕೊಳ್ಳುತ್ತಾ ಹೋದಾಗ ಮಾತ್ರ ಸಮಾಜದ ಬದಲಾವಣೆ ಮತ್ತು ಸರ್ವತೋಮುಖ ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತದೆ. ಯುವಸಮಾಜ ಆಯಾ ದೇಶದ ಭವಿಷ್ಯವನ್ನು ನಿರ್ಧರಿಸುವಂತ ಸಾಮರ್ಥ್ಯ ಹೊಂದಿದ್ದರೂ, ಸರಿಯಾದ ಮಾರ್ಗದರ್ಶನದ ಕೊರತೆಯಿಂದ ಅವರು ಯಾವುದೇ ಕಾರ್ಯಗಳಲ್ಲಿ ತೊಡಗಿಸಿಕೊಳ್ಳದಿರುವುದನ್ನು ನಾವು ಗಮನಿಸಬಹುದು. ನಮ್ಮೆಲ್ಲರಿಗೂ ತಿಳಿದಿರುವಂತೆ ಪ್ರಸ್ತುತ ನಮ್ಮ ರಾಷ್ಟ್ರದಲ್ಲಿ ಸುಮಾರು ಶೇ 40 ರಿಂದ ಶೇ 50 ರಷ್ಟುಯುವಜನರ ಸಮುದಾಯವಿದೆ,ಈ ಸಮೂಹವು ಸಮಾಜದ ಪ್ರಗತಿಯಲ್ಲಿ ತಮ್ಮನ್ನು ತಾವು ಶೇ 20ರಷ್ಟು ಮಾತ್ರ ತೊಡಗಿಸಿಕೊಂಡರೂ ಸಹ ಯಾವುದೇ ಆತಂಕವಿಲ್ಲದೆ ಸಮಾಜದ ಅಭಿವೃದ್ಧಿಯಾಗುತ್ತದೆಂದು ಹೇಳಬಹುದು. ಈ ಒಂದು ಪ್ರಕ್ರಿಯೆಗಾಗಿ ಸಕಾರಾತ್ಮಕವಾದ ಸುಸರ್ಜಿತ ತರಬೇತಿಯನ್ನು ನೀಡುವುದು ತುಂಬಾ ಅವಶ್ಯಕವಾಗಿದೆ.
ಯುವ ಸಮೂಹವು ಉತ್ಸಾಹ ಮತ್ತು ಸಾಮರ್ಥ್ಯದಿಂದ ಕೂಡಿರುತ್ತಾರೆ. ಅದಕ್ಕಾಗಿಯೇ ಅವರು ಯಾವುದೇ ಕಾರ್ಯಗಳಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡು ಕಾರ್ಯನಿರ್ವಹಿಸಿರುವುದನ್ನು, ಹಾಗೂ ಆ ಕೆಲಸಗಳು ಯಶಸ್ವಿಯಾಗಿರುವುದನ್ನು ನಾವು ಕಾಣಬಹುದು. ಆದರೆ ಪ್ರಸ್ತುತ ಸಮಾಜದ ಬೆಳೆವಣಿಗೆಯಲ್ಲಿ ಯುವಜನ ಖಿನ್ನತೆ ಹಾಗೂ ಮಾನಸಿಕ ಆರೋಗ್ಯದಲ್ಲಿ ಪರಿಣಾಮ ಬೀರಿ ಅವರ ಚೈತನ್ಯತೆ ಮತ್ತು ಸೃಜನಶೀಲತೆಯು ಕುಂಠಿತವಾಗುತ್ತಿದೆ. ಹಾಗಾಗಿ ಯುವ ಸಮಾಜವು ತಮ್ಮನ್ನುತಾವು ಅರ್ಥೈಸಿಕೊಳ್ಳುವಂಥಹ ಶಿಕ್ಷಣದ ಜೊತೆಗೆ ಸಮಾಜದಲ್ಲಿ ಸುವ್ಯವಸ್ಥತೆಯನ್ನು ಕಾಪಾಡುವ ಜವಾಬ್ದಾರಿಯ ಕಲಿಕೆಯನ್ನು ನೀಡುವುದು ತುಂಬ ಮುಖ್ಯವಾಗಿರುತ್ತದೆ.
ಪ್ರಸ್ತುತ ಸಮಾಜದಲ್ಲಿ ಶಿಕ್ಷಣವು ಮೂಲಭೂತ ಹಕ್ಕಾಗಿದ್ದು ಅದು ಕೆಲವು ವರ್ಗಕ್ಕೆ ಸೀಮಿತವಾಗಿರುವುದು ಶಿಕ್ಷಣದ ವ್ಯವಸ್ಥೆಯು ಯುವ ಪೀಳಿಗೆಯಲ್ಲಿ ಆತಂಕ ಮತ್ತು ಭಯವನ್ನು ಹೆಚ್ಚು ಮಾಡುವಷ್ಟು ಬೇರೆ ಯಾವ ವಲಯದಲ್ಲೂ ಅಷ್ಟೊಂದು ಪರಿಣಾಮ ಬೀರುತ್ತಿಲ್ಲ ಎಂದು ಹೇಳಬಹುದು ಮತ್ತು ಶಿಕ್ಷಣದ ಪ್ರತಿ ಹಂತದಲ್ಲೂ ಪರೀಕ್ಷೆಗೆ ಒಳಗಾಗಬೇಕು ಹೆಚ್ಚು ಅಂಕಗಳಿಸಬೇಕು, ಉದ್ಯೋಗಗಳಿಸುವ ಒತ್ತಡ, ಕೌಶಲ್ಯ ಪಡೆಯಬೇಕು ಮತ್ತು ಉತ್ತಮವಾದ ವೇತನವನ್ನು ಪಡೆಯಬೇಕು ಎಂಬ ಇತ್ಯಾದಿ ಬಯಕೆಗಳ ಜೊತೆ ಸಾಗುತ್ತಿದ್ದಾರೆ ಆದರೆ ಇದೊಂದೇ ಜೀವನದ ಮಾರ್ಗವಲ್ಲ ಸಮಾಜದ ಅಭಿವೃದ್ಧಿಯ ಜವಾಬ್ದಾರಿ ಮತ್ತು ಕಾಳಜಿ ಸಾಮಾಜಿಕ ಸಮಸ್ಯೆಗಳ ಆಲೋಚನೆ ಮತ್ತು ಸಮಸ್ಯೆಗಳಿಂದ ಹೊರಬರಲು ಹಾಗೂ ಸಮಾಜದ ಬದಲಾವಣೆಗಾಗಿ ಪ್ರಯತ್ನಗಳು ಕಡಿಮೆಯಾಗುತ್ತಿದ್ದು ಅಭಿವೃದ್ಧಿಗೆ ಅಡೆತಡೆಯಾಗಿರುವುದನ್ನು ನೋಡುಬಹುದು.
ಯುವಸಮುದಾಯದ ಬದುಕಿನ ಪಯಣದಲ್ಲಿ ಬರುವ ಅಡೆ ತಡೆಗಳು ಅಥವಾ ಸಮಸ್ಯೆಗಳನ್ನು ಸರಿಯಾದ ರೀತಿಯಲ್ಲಿ ಎದುರಿಸುವ ಶಕ್ತಿಯು ಅಥವಾ ಸಾಮರ್ಥ್ಯವು ಹೀನವಾಗುತ್ತಿರುವುದು ಯುವ ಪೀಳಿಗೆಯಲ್ಲಿ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಪ್ರಭಾವ ಬೀರುತ್ತಿದ್ದು ಇದರಿಂದ ಸಾಕಷ್ಟು ಸಾವು ನೋವುಗಳು ಆಗುತ್ತಿರುವುದನ್ನು ಗಮನಿಸಬಹುದು.ಹಾಗೆಯೇ ಕೌಟುಂಬಿಕ ಜವಾಬ್ದಾರಿಯನ್ನು ಹಾಗೂ ಸಾಮಾಜಿಕ ಜವಾಬ್ದಾರಿಗಳನ್ನೂ ನಿರ್ವಹಿಸಲು ಮಾನಸಿಕವಾಗಿ ಸ್ಥೈರ್ಯ ಹೊಂದಲು ಶಿಕ್ಷಣ ವ್ಯವಸ್ಥೆ ಯಲ್ಲಿ ಯುವಪೀಳಿಗೆಯ ಪರಿಸ್ಥಿತಿಗೆ ಅನುಗುಣವಾಗಿ ಬದಲಾವಣೆಯನ್ನು ತರುವುದು ತುಂಬಾ ಮಹತ್ವವಾಗಿದೆ ಸದೃಢತೆಯನ್ನು ಹೆಚ್ಚಿಸುವುದು ಆತ್ಮ ಸ್ಥೈರ್ಯವನ್ನು ಹೆಚ್ಚಿಸುವುದು ತುಂಬಾ ಮುಖ್ಯವಾಗಿದೆ ಹಾಗಾಗಿ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ದುರ್ಬಲ ಗೊಂಡಿರುವ ಯುವ ಸಮುದಾಯದ ಜೊತೆ ನಮ್ಮ ಡ್ರೀಮ್ ಎ ಡ್ರೀಮ್ ಸಂಸ್ಥೆಯು ಕಾರ್ಯಪ್ರವೃತ್ತವಾಗಿರೋದು ಯುವ ಪೀಳಿಗೆಯ ಸರ್ವೋತೋಮುಖ ಅಭಿವೃದ್ದಿಗಾಗಿ ಶಿಕ್ಷಣದ ವ್ಯವಸ್ಥೆಯಲ್ಲಿ ಸಕಾರಾತ್ಮಕ ಹಾಗೂ ಸೃಜನಶೀಲತೆ ಬದಲಾವಣೆಯನ್ನು ತರುವುದರ ಕಡೆಗೆ ಕಾರ್ಯ ನಿರ್ವಹಿಸುತ್ತಿದ್ದೇವೆ.
ಯುವ ಪೀಳಿಗೆಯು ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಜೀವನದ ಹಾದಿಯಲ್ಲಿ ಸಾಗಿ ಸಮಾಜದ ಬದಲಾವಣೆಯಲ್ಲಿ ಸಕಾರಾತ್ಮಕವಾಗಿ ಪಾಲ್ಗೊಳ್ಳುವುದು ಬಹುಮುಖ್ಯವಾಗಿದೆ ಹಾಗೆಯೇ ಯುವಜನರ ಸುಸ್ಥಿರತೆಯ ಅಭಿವೃದ್ದಿಯನ್ನು ತರಲು ಸಾಕಷ್ಟು ತರಬೇತಿಗಳು ಅವಶ್ಯಕವಾಗಿದ್ದು ಡ್ರೀಮ್ ಎ ಡ್ರೀಮ್ ಸಂಸ್ಥೆಯು ಥ್ರಿವಿಂಗ್ ಸೆಂಟರ್ ಕಾರ್ಯಕ್ರಮದ ಮೂಲಕ 14ನೇ ವಯಸ್ಸಿನಿಂದ 23ನೇ ವಯಸ್ಸಿನ ಯುವಸಮುದಾಯಕ್ಕೆ ಮಾರ್ಗದರ್ಶನವನ್ನು ನೀಡಲಾಗುತ್ತಿದೆ.
ಮೇಲಿನ ಎಲ್ಲಾ ಅಂಶಗಳಿಗೆ ಪ್ರಾಯೋಗಿಕ ರೂಪವನ್ನು ನೀಡುವ ಮೂಲಕ ಮಾತ್ರ ಯುವ ಪೀಳಿಗೆಯು ಸಮಾಜದ ಕಡೆಗೆ ತನ್ನ ಜವಾಬ್ದಾರಿಗಳನ್ನು ಪೂರೈಸಲು ಸಾಧ್ಯವಾಗುತ್ತದೆ. ಈ ಸ್ಥಿತಿಯಲ್ಲಿ ಸಮಾಜವು ಸುಖವಾಗಿರಲು ಸಾಧ್ಯ. ಯುವಜನರು ಭಾರತದ ಭವಿಷ್ಯದ ಆಶಾಕಿರಣವಾಗಿದ್ದು, ಸಮಾಜದ ನಿರೀಕ್ಷೆಗಳನ್ನು ಸಾಧ್ಯವಾದಷ್ಟು ಈಡೇರಿಸಲು ಪ್ರಯತ್ನಿಸಬೇಕು. ಇದರಿಂದಾಗಿ ಮಾತ್ರ ಯುವಕರು ಸಮಾಜದಲ್ಲಿ ಬದಲಾವಣೆ ನಿರ್ಮಾಣಮಾಡಲು ಸಾಧ್ಯ.
About the Authors:
Mahendra B is Associate Manager/Thriving Centre Programme at Dream a Dream. He has been working with young people since 9 years.
Vijay Kumar M is Manager/Thriving Centre Programme at Dream a Dream. He has been working with young people since 10 years.