ಕೊರೊನಾ ನಂತರದ ಪರಿಸ್ಥಿತಿಗೆ ಕರ್ನಾಟಕದ ಶಾಲೆಗಳು ಸನ್ನದ್ಧವಾಗಿವೆಯೇ?, ಸಮೀಕ್ಷೆಯೊಂದರ ವರದಿ ಇಲ್ಲಿದೆ..

Dream a Dream featured in Vijaya Karnataka, written by Susheel BN

ಬೆಂಗಳೂರು ಮೂಲದ ಸರ್ಕಾರೇತರ ಸಂಸ್ಥೆಯಾಗಿರುವ ಡ್ರೀಮ್‌ ಎ ಡ್ರೀಮ್‌’, “ಕೋವಿಡ್‌-19 ನಂತರದ ಜಗತ್ತಿಗೆ (ಪರಿಸ್ಥಿತಿಗೆ) ಕರ್ನಾಟಕದ ಶಾಲೆಗಳು ಸಿದ್ಧವಾಗಿವೆಯೇ?” ಎಂಬ ವಿಷಯದ ಕುರಿತು ಸಮೀಕ್ಷೆಯೊಂದನ್ನು ಕೈಗೊಂಡಿತ್ತು. ಪ್ರಸ್ತುತ ಇದರ ವರದಿಯನ್ನು ಸಾರ್ವಜನಿಕರ ಮುಂದಿಟ್ಟಿದ್ದು, ಶಾಲೆಯ ಸನ್ನದ್ಧತೆಯ ಸಮೀಕ್ಷೆಯು ಶಾಲೆಗಳನ್ನು ಪುನಃ ಪ್ರಾರಂಭಿಸಲು ಇನ್ನೂ ಸಿದ್ಧವಾಗಿಲ್ಲ ಎಂದು ಸಮೀಕ್ಷೆಯ ವರದಿ ಸೂಚಿಸಿದೆ.

ಸಂಸ್ಥೆಯು ನಡೆಸಿದ ಸಮೀಕ್ಷೆಯಲ್ಲಿ ಶೇ.95 ರಷ್ಟು ಶಾಲೆಗಳು ಈ ವರ್ಷದ ಪರೀಕ್ಷೆಗಳನ್ನು ಮುಂದೂಡಲು ಇಚ್ಚೆ ಪಡುತ್ತವೆ. ವಾಸ್ತವಿಕವಾಗಿ ಬಹುತೇಕ ಶಾಲೆಗಳು ಪಠ್ಯಕ್ರಮಗಳನ್ನು ಪೂರ್ಣಗೊಳಿಸುವ ಅಥವಾ ಬೋರ್ಡ್‌ ಪರೀಕ್ಷೆಗಳಿಗೆ ಮಾದರಿಗಳನ್ನು ಸಿದ್ಧಪಡಿಸುವ ಕಾರ್ಯದಲ್ಲಿ ತೊಡಗಿರುವುದರಿಂದ ಶಾಲೆಯ ಮಕ್ಕಳು ಬೋರ್ಡ್‌ ಪರೀಕ್ಷೆಗಳನ್ನು ಪೂರ್ಣಗಳಿಸುವಲ್ಲಿ ಸಮರ್ಥರಾಗಿಲ್ಲ ಎಂದು ಭಯಪಡುತ್ತಿವೆ.

ಕಡಿಮೆ ವೆಚ್ಚದಲ್ಲಿ ನಡೆಯುವ ಖಾಸಗಿ ಶಾಲೆಗಳು, ಸರ್ಕಾರಿ ಅನುದಾನಿತ ಶಾಲೆಗಳು ಮತ್ತು ಸರ್ಕಾರಿ ಶಾಲೆಗಳ ಶಿಕ್ಷಣ ವ್ಯವಸ್ಥೆಯ ಮೇಲೆ ಕೊರೊನಾ ದಿಂದ ಆದ ಪರಿಣಾಮವನ್ನು ಅರ್ಥಮಾಡಿಕೊಳ್ಳಲು ಕರ್ನಾಟಕದ 28 ಜಿಲ್ಲೆಗಳಲ್ಲಿ 853 ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು ಮತ್ತು ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಶಾಲಾ ಸಿದ್ಧತೆ ಸಮೀಕ್ಷೆಯನ್ನು ಡ್ರೀಮ್‌ ಎ ಡ್ರೀಮ್‌ ನಡೆಸಿದೆ. ಅದರ ಪ್ರಮುಖ ಅಂಶಗಳನ್ನು ‘ವಿಕ’ಗೆ ತಿಳಿಸಿದೆ.

ರಾಜ್ಯದಲ್ಲಿ 7ನೇ ತರಗತಿ ವರೆಗೂ ಆನ್‌ಲೈನ್‌ ಶಿಕ್ಷಣ ರದ್ದು?

ಲಾಕ್‌ಡೌನ್‌ ಕಾರಣದಿಂದಾಗಿ ನಿಗದಿತ ಶೈಕ್ಷಣಿಕ ಸಮಯವು ಕಡಿಮೆಯಾಗಿರುವುದರಿಂದ ಶೇ.92 ರಷ್ಟು ಮುಖ್ಯೋಪಾಧ್ಯಾಯರು ಹೊಸ ಶೈಕ್ಷಣಿಕ ವರ್ಷಕ್ಕೆ ಕಡಿಮೆ ಪಠ್ಯಕ್ರಮವನ್ನು ನಿಗದಿ ಮಾಡಬೇಕೆಂದು ಕೋರಿದ್ದಾರೆ. ಈ ಸಮೀಕ್ಷೆಯಿಂದ ಶೇ.97 ರಷ್ಟು ಶಾಲೆಗಳಲ್ಲಿ ಆನ್‌ಲೈನ್‌ ತರಗತಿಗಳನ್ನು ಬೆಂಬಲಿಸಲು ಬೇಕಾಗುವುದಕ್ಕಿಂತ ಕಡಿಮೆ ಪ್ರಮಾಣದ ಡಿಜಿಟಲ್ ಮೂಲ ಸೌಕರ್ಯಗಳನ್ನು ಹೊಂದಿವೆ ಎಂದು ತಿಳಿದು ಬಂದಿದೆ. ಶಿಕ್ಷಕರು ಕಳೆದ 2 ತಿಂಗಳಿಂದ ವೇತನವನ್ನು ಪಡೆಯದೆ ಇರುವ ದುಃಖಕರ ಸ್ಥಿತಿಯು ಸಮೀಕ್ಷೆಯಿಂದ ಹೊರಬಂದಿದೆ. ಶೇ.96 ರಷ್ಟು ಶಾಲೆಗಳು ವಿದ್ಯಾರ್ಥಿಗಳ ಯೋಗಕ್ಷೇಮ ಮತ್ತು ಮಾನಸಿಕ ಆರೋಗ್ಯದ ಸಮಸ್ಯೆಗಳನ್ನು ಪರಿಹರಿಸಲು ಬೆಂಬಲವನ್ನು ಬಯಸುತ್ತವೆ ಎಂಬುದು ಸಮೀಕ್ಷೆಯಿಂದ ತಿಳಿದುಬಂದಿದೆ.

ಈ ಸಮೀಕ್ಷೆಯ ಕುರಿತು ಮಾತನಾಡಿರುವ ಡ್ರೀಮ್‌ ಎ ಡ್ರೀಮ್‌ನ ಸಿಇಒ ಆದ ಶ್ರೀಮತಿ. ಸುಚೇತ ಭಟ್ ರವರು ” ಶಾಲೆಗಳಲ್ಲಿ ಆನ್‌ಲೈನ್‌ ತರಗತಿಗಳನ್ನು ನಡೆಸುವುದನ್ನು ಒತ್ತಾಯಿಸುವುದೊಂದೆ ಈ ಸಮಸ್ಯೆಗೆ ಪರಿಹಾರವಲ್ಲ. ಈ ರೋಗವು ವಿದ್ಯಾರ್ಥಿಗಳಿಗೆ ಆಘಾತಕಾರಿಯಾಗಿದೆ ಮತ್ತು ಹೆಚ್ಚಿನ ಒತ್ತಡದಿಂದಾಗಿ ಪ್ರಸ್ತುತದಲ್ಲಿ ಡಿಜಿಟಲ್ ವ್ಯವಸ್ಥೆಯು ಇದೆಯಾದರೂ, ಅದನ್ನು ದುರ್ಬಲ ಹಿನ್ನಲೆಯುಳ್ಳ ವಿದ್ಯಾರ್ಥಿಗಳು ಶಾಲೆಗಳನ್ನು ಬಿಟ್ಟು ಬಿಡುತ್ತಾರೆ. ವಿದ್ಯಾರ್ಥಿಗಳ ಯೋಗಕ್ಷೇಮವನ್ನು ರಕ್ಷಿಸುವಲ್ಲಿ ಶಾಲೆಗಳು ಯಾವಾಗಲೂ ಮಹತ್ವದ ಪಾತ್ರವಹಿಸುತ್ತವೆ. ಹಾಗೂ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ತರಗತಿಗಳ ಹೆಚ್ಚಿನ ಒತ್ತಡವನ್ನು ನೀಡುವುದಕ್ಕಿಂತ ಹೆಚ್ಚಾಗಿ ಎಲ್ಲಾ ಕೋನಗಳಿಂದಲೂ ಅವರಿಗೆ ಸಾಮಾಜಿಕ ಭಾವನಾತ್ಮಕ ಬೆಂಬಲ ಬೇಕಾಗುತ್ತದೆ,” ಎಂದಿದ್ದಾರೆ.

ಶಿಕ್ಷಕರ ವರ್ಗಕ್ಕೆ ಹೊಸ ನಿಯಮಾವಳಿಗಳು; ಆಕ್ಷೇಪಣೆಗೆ 15 ದಿನ ಅವಕಾಶ

ಸಮೀಕ್ಷೆಯ ಒಳನೋಟವನ್ನು ಹಂಚಿಕೊಂಡ ಸಂಸ್ಥೆಯ ಸಂಶೋಧನಾ ನಿರ್ದೇಶಕರಾದ ಶ್ರೀ.ಶ್ರೀಹರಿ ರವೀಂದ್ರನಾಥ್ ಮಾತನಾಡಿ, “ಶಾಲೆಗಳು ಆನ್‌ಲೈನ್‌ ಬೋಧನಾ ವ್ಯವಸ್ಥೆಯನ್ನು ನಿರ್ವಹಿಸುವಲ್ಲಿ ಯಾವುದೇ ಅನುಭವವನ್ನು ಹೊಂದಿಲ್ಲ ಎಂಬುದು ಸಮೀಕ್ಷೆಯಿಂದ ಕಂಡುಬಂದಿದೆ. ವಾಸ್ತವವಾಗಿ ಹೆಚ್ಚಿನ ಶಾಲೆಗಳಿಗೆ ಮುಂದಿನ ದಾರಿಯ ಬಗ್ಗೆ ಸ್ಪಷ್ಟತೆ ಇಲ್ಲ ಹಾಗೂ ಡಿಜಿಟಲ್ ಕಲಿಕೆ ಮತ್ತು ಆನ್‌ಲೈನ್‌ ಶಿಕ್ಷಣ ನಡೆಸುವ ಬಗ್ಗೆ ಹೆಚ್ಚಿನ ಬೆಂಬಲ ಬೇಕಾಗಿದೆ,” ಎಂದಿದ್ದಾರೆ.

Copyright © 2024 Dream a Dream. All Rights Reserved. Dream a Dream is a registered charitable trust with requisite tax exemptions for all donations made.